101+ Sarvagna Vachanagalu | ಸರ್ವಜ್ಞನ ತ್ರಿಪದಿ ವಚನಗಳು

Author:

Published:

Updated:

Last Updated on August 8, 2023

ಇಲ್ಲಿ ನಾವು ೧೦೧ Sarvagna ವಚನಗಳನ್ನು (Sarvagna Vachanagalu)ಸಂಗ್ರಹಿಸಿದ್ದೇವೆ. ನೀವು ಈ Sarvagna ತ್ರಿಪದಿ ವಚನಗಳನ್ನು ಎಲ್ಲಿಯೂ ಕೂಡ ಉಪಯೋಗಿಸಬಹುದು.

ವಚನಗಳನ್ನು ನೀವು copy ಕೂಡ ಮಾಡಬಹದು ಮತ್ತು ಇದರ ಜೊತೆಗೆ ನಾವು Sarvagna ವಚನಗಳ ಚಿತ್ರವೂ ಕೊಟ್ಟಿದ್ದೇವೆ ಅದನ್ನು ನೀವು download ಕೂಡ ಮಾಡಬಹದು.

ಸರ್ವಜ್ಞನ ವಚನಗಳು

1. ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ |

ಕೇಶವನು ಭಕ್ತರೊಳಗೆಲ್ಲ ಮೂರು ಕ |

ಣ್ಣೀಶನೇ ದೈವ ಸರ್ವಜ್ಞ ||

2. ಉಂಬಳಿಯ ಇದ್ದವನು | ಕಂಬಳಿಯ ಹೊದೆಯುವನೇ ? |

ಶಂಭುವಿರಲ್ಲಿಕ್ಕೆ ಮತ್ತೊಂದು ದೈವವ |

ನಂಬುವನೇ ಹೆಡ್ಡ ಸರ್ವಜ್ಞ ||

3. ಅಂಜದಲೆ ಕೊಂಡಿಹರೆ | ನಂಬು ಅಮೃತದಕ್ಕು |

ಅಂಜೆ ಅಳುಕುತಲಿ ಕೊಂಡಿಹರೆ, ಅಮೃತವು |

ನಂಜಿನಂತಕ್ಕು ಸರ್ವಜ್ಞ ||

4. ಎಂಜಲೂ ಅಶೌಚ |

ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ |

ರಂಜನನ ನೆನಯೂ ಸರ್ವಜ್ಞ ||

5. ಭೂತೇಶನೆರಗುವನು | ಜಾತಿ ಮಾದಿಗನಲ್ಲ |

ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ |

ದಾತ ಮಾದಿಗನು ಸರ್ವಜ್ಞ ||

6. ಕುಲಗೆಟ್ಟವರು ಚಿಂತೆ | ಯೊಳಗಿಪ್ಪರಂತಲ್ಲ |

ಕುಲಗೆಟ್ಟ ಶಿವನ ಮರೆಹೊಕ್ಕು ಋಷಿಗಳಿಗೆ |

ಕುಲಗೊತ್ರವುಂಟೆ ? ಸರ್ವಜ್ಞ ||

7. ಜಾತಿಹೀನನ ಮನೆಯ | ಜ್ಯೋತಿ ತಾ ಹೀನವೆ ? |

ಜಾತಂಗೆ ಜಾತನೆನಲೇಕೆ ? ಅರುವಿಡಿ |

ದಾತನೇ ಜಾತ ಸರ್ವಜ್ಞ ||

8. ಯಾತರ ಹೂವೇನು ? ನಾತವಿದ್ದರೆ ಸಾಕು |

ಜಾತಿಯಲಿ ಜಾತಿಯೆನಬೇಡ ಶಿವನೊಲಿ |

ದಾತನೆ ಜಾತ ಸರ್ವಜ್ಞ ||

9. ಮಾಯ ಮೋಹವನೆಚ್ಚಿ | ಕಾಯುವನು ಕರಗಿಸುತೆ |

ಆಯಾಸಗೊಳುತಲಿರಬೇಡ ಓಂ ನಮಃ |

ಶಿವಾಯವೆಂದೆನ್ನು ಸರ್ವಜ್ಞ ||

10. ಅಕ್ಕರವು ತರ್ಕಕ್ಕೆ | ಲೆಕ್ಕವು ಗಣಿತಕ್ಕೆ |

ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ |

ರಕ್ಕರವೆ ಸಾಕು ಸರ್ವಜ್ಞ ||

11. ಮುನಿವಂಗೆ ಮುನಿಯದಿರು | ಕನವಂಗೆ ಕನಿಯದಿರು |

ಮನಸಿಜಾರಿಯನು ಮರೆಯದಿರಿ ಶಿವಕೈಪೆ |

ಮನವು ಫನವಕ್ಕು ಸರ್ವಜ್ಞ ||

12. ಎಲ್ಲರನು ನೆರೆ ಬೇಡ | ಹಲ್ಲು ಬಾಯ್ದೆರೆಯುವರೇ ? |

ಬಲ್ಲಿದಾ ಶಿವನ ಭಜಸಿದರೆ ಶಿವ ತಾನು |

ಇಲ್ಲೆನ್ನಲರಿಯ ಸರ್ವಜ್ಞ ||

13. ನರರ ಬೇಡುವ ದೈವ | ಮರವೀಯ ಬಲ್ಲದೇ ? |

ತಿರಿವರೂಡನೆ ತಿರಿವರೇನದರಿತು |

ಹರನ ಬೇಡುವುದು ಸರ್ವಜ್ಞ ||

14. ಇಂದ್ರನಾನೆಯನೇರಿ | ಒಂದನೂ ಕೂಡಲರಿಯ |

ಚಂದ್ರಶೇಖರನು ಮುದಿ ಎತ್ತನ್ನೇರಿ ಬೇ |

ಕೆಂದುದನು ಕೂಡುವ ಸರ್ವಜ್ಞ ||

15. ಭ್ರಷ್ಟದೈವಕೆಬಾಯಿ ಬಿಟ್ಟಿಲ್ಲ ಫಲವಿಲ್ಲ |

ಸೃಷ್ಟಿಗೀಶ್ವರನ ಭಜಸಲು ಮುಂದಕ್ಕೆ |

ಇಷ್ಟಾರ್ಥವೀವ ಸರ್ವಜ್ಞ ||

16. ದೇಹಿಯೆನಬೇಡ ನಿ | ರ್ದೇಹಿ ಜಂಗಮದೇವ |

ದೇಹ ಗುಣದಾಸೆಯಳಿದಡೆಯಾತ ನಿ |

ರ್ದೇಹಿ ಕಾಣಯ್ಯ ಸರ್ವಜ್ಞ ||

17. ಸಾರವನು ಬಯಸುವರೆ | ಕ್ಷಾರವನು ಬೆರಿಸುವದು |

ಮಾರಸಂಹರನ ನೆನೆದರೆ ಮೃತ್ಯುವು |

ದೂರಕ್ಕೆ ದೂರ ಸರ್ವಜ್ಞ ||

18. ಕಾಯ ಕಮಲದ ಸಜ್ಜೆ | ಜೀವರತನುವ ಲಿಂಗ |

ಭಾವ ಪುಷ್ಟದಿಂ ಶಿವಪೂಜಿ ಮಾಡುವರೆ |

ದೇವರೆಂದೆಂಬ ಸರ್ವಜ್ಞ ||

19. ಓದು ವಾದಗಳೇಕೆ | ಗಾದಿಯ ಮಾತೇಕೆ |

ವೇದ ಪುರಾಣ ನೀನಗೇಕೆ ? ಲಿಂಗದಾ |

ಹಾದಿಯರಿದವಗೆ ಸರ್ವಜ್ಞ ||

20. ಒಪ್ಪಾದ ನುಡಿಯೇಕೆ ಪುಷ್ಪವೇರಿಸಲೇಕೆ ? |

ಅರ್ಪಿತನ ಗೂಡವೆ ತನಗೇಕೆ ? ಲಿಂಗದಾ |

ನೆಪ್ಪನರಿದವಗೆ ಸರ್ವಜ್ಞ ||

21. ಗಂಗೆ ಗೋದಾವರಿಯು | ತುಂಗಭದ್ರೆಯು ಮತ್ತೆ |

ಹಿಂಗದೆ ಮುಳಿಗಿ ಫಲವೇನು ? ನಿನ್ನಲೆ |

ಲಿಂಗದರುವಿಲ್ಲ ಸರ್ವಜ್ಞ ||

22. ಮೆಟ್ಟದಾ ಕಲ್ಲಿಂಗ | ಮೊಟ್ಟಿ ಪತ್ರಿಯ ಹಾಕಿ |

ಕಟ್ಟದಾ ಲಿಂಗ ಅಡಿಮಾಡಿ ಶರಣೆಂಬ |

ಭ್ರಷ್ಟನ ಕಂಡ್ಯಾ ? ಸರ್ವಜ್ಞ ||

23. ಗುರುವಿಂದ ಬಂಧಗಳು | ಗುರುವಿಂದ ದೈವಗಳು |

ಗುರುವಿಂದಲಿದುದು ಪುಣ್ಯವದು, ಜಗಕೆಲ್ಲ |

ಗುರುವಿಂದ ಮುಕ್ತಿ ಸರ್ವಜ್ಞ ||

24. ಶಿವಪೂಜೆ ಮಾಡಿದಡೆ | ಶಿವನ ಕೊಂಡಾಡಿದಡೆ |

ಶಿವನಲ್ಲಿ ನೆನಹ ನಿಲಿಸಿದಡೆ ಶಿವಲೋಕ |

ವವಗ ಕಾಣಯ್ಯ ಸರ್ವಜ್ಞ ||

25. ನಿಷ್ಠೆ ಇದ್ದಡೆ ಶಿವನು | ಗಟ್ಟಿಗೊಂಡೊಳಗಿರ್ಪ |

ನಿಷ್ಠೆಯಿಲ್ಲದಲೆ ಭಜಸಿದೊಡ ಶಿವನವನ |

ಬಿಟ್ಟು ಬಯಲಪ್ಪ ಸರ್ವಜ್ಞ ||

26. ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು |

ಇಟ್ಟಾವಿಭೂತಿಯರಿಯದಿರೆ ಸೀಳಿದಾ |

ಬಟ್ಟೆಯಂತಕ್ಕು ಸರ್ವಜ್ಞ ||

27. ರುದ್ರಾಕ್ಷಿಭಸಿತವನು | ಹೊದ್ದಿರಲು ದೇಹದೂಳ |

ಗಿದ್ದ ಪಾಪಗಳ ಬಯಲಾಗಿ ಶಿವನು ತಾ |

ನಿದ್ದಲ್ಲಿ ಬರುವ ಸರ್ವಜ್ಞ ||

28. ಲಿಂಗದಲಿ ಮನವಾಗಿ | ಲಿಂಗದಲಿ ನೆನಹಾಗಿ

ಲಿಂಗದಲಿ ನೋಟ ನುಡಿಕೂಟವಾದವನು |

ಲಿಂಗವೇ ಅಕ್ಕು ಸರ್ವಜ್ಞ ||

29. ದೇಹಿಯನಬೇಡ | ನಿರ್ದೇಹಿ ಜಂಗಮಲಿಂಗ |

ದೇಹ ಗುಣದಾಸೆಯಳಿದೊಡೆ ಆತ ನೀ |

ರ್ದೇಹಿ ಕಾಣಯ್ಯ ಸರ್ವಜ್ಞ ||

30. ಲಿಂಗವೇ ದರುಶನವು | ಲಿಂಗವೇ ಸ್ಪರುಶನವು |

ಲಿಂಗ ಸಹ ಸರ್ಪ ಸುಖಭೋಗವಾದವನು |

ಲಿಂಗಕಾಣಯ್ಯ ಸರ್ವಜ್ಞ ||

31. ಲಿಂಗದಿಚ್ಛೆಗೆ ಹರಿದು | ಭಂಗಗೊಳದಿರು ಮನಜ

ಲಿಂಗದೊಳು ನೆನಹನಿರಿಸಿ ಸತ್ಯದ ನಿಲಲು |

ಲಿಂಗ ನೀನಪ್ಪೆ ಸರ್ವಜ್ಞ ||

32. ವಂಶವನು ಪುಗನೆಂದಿ | ಗಾಶಿಸನು ಪರಧನವ

ಸಂಶಯವನಳಿದ ನಿಜಸಿಖಿ ಮಹಾತ್ಮನು |

ಹಿಂಸೆಗೊಡಬಡನು ಸರ್ವಜ್ಞ ||

33. ಅರ್ಪಿತದ ಭೇದವನು |

ತಪ್ಪದಲೆ ತಿಳಿದಾತ ಸರ್ಪಭೂಷಣನ ಸಮನಹನು ನಿಜಸುಖಿದೊ |

ಳೊಪ್ಪುತ್ತಲಿಹನು ಸರ್ವಜ್ಞ ||

34. ಈಶಪ್ರಸಾದವನು | ಸೂಸದಲೆ ತಾ ಕೊಳ್ಳೆ |

ಶಾಶ್ವತವಾದ ಪದವಕ್ಕು ಜಗಕೆಲ್ಲ |

ಈಶ್ವರನೇ ಅಕ್ಕು ಸರ್ವಜ್ಞ ||

35. ಭೋಗಿಸುವ ವಸ್ತುಗಳ | ಭೋಗಿಸು ಶಿವಗಿತ್ತು |

ರಾಗದಿಂ ಸತ್ಯವೆರಸಿಹ ಪ್ರಸಾದಿಯ |

ಶ್ರೀ ಗುರುವ ಎಂಬೆ ಸರ್ವಜ್ಞ ||

36. ಲಿಂಗವಿರಹಿತನಾಗಿ | ನುಂಗದಿರು ಎನುವನು |

ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು |

ನುಂಗಿದೆಂತಕ್ಕು ಸರ್ವಜ್ಞ ||

37. ಅಂಜದಲೆ ಕೊಂಡಿಹರೆ | ನಂಜು ಅಮೃತವದಕ್ಕು |

ಅಂಜ್ಜಿ, ಅಳುಕುತಲಿ ಕೋಡಿಹರೆ ಅಮೃತವು |

ನಂಜಿನಂತಕ್ಕು ಸರ್ವಜ್ಞ ||

38. ಲಿಂಗಕ್ಕೆ ತೋರದಲಿ | ನುಂಗಗಿದಡೆ ಎನಹುದು ? |

ಭಂಗಬಂಧನವು ಫನವಹುದು ?

ಆ ಅಂಗ | ಹಿಂಗಿಹುದು ಸರ್ವಜ್ಞ ||

39. ಸಿರಿಯು ಬಂದರೆ ಲೇಸು | ತಿರದ ಜವ್ವನ ಲೇಸು |

ಮರಣವಿಲ್ಲದಾ ಮಗಲೇಸು ಲಿಂಗಕ್ಕೆ |

ಶರಣುವೇ ಲೇಸು ಸರ್ವಜ್ಞ ||

40. ಸೋಕಿದಾ ಸುಖಂಗಳ |

ನೇಕವನು ಶಿವಗಿತ್ತು |

ತಾ ಕಿಂಕರತೆಯ ಕೈಕೊಂಡ ಮನಜನೇ ಲೋಕಕ್ಕೆ ಶರಣ ಸರ್ವಜ್ಞ ||

41. ಮಲಯಜದ ಮರದೊಳಗೆ | ಸಲೆ ಗಂಧವಿಪ್ಪಂತೆ |

ಸುಲಲಿತವು ಆದ ಶರಣರಾಹೃದಯದಲಿ |

ನೆಲಸಿಹನು ಶಿವನು ಸರ್ವಜ್ಞ ||

42. ಕಿಚ್ಚಿನೊಳು ಸುಫೃತವು | ಒಚ್ಚತದಿ ಕರ್ಪುವರವು |

ಅಚ್ಚಳಿದು ನಿಜದಿ ನಿಂದಂತೆ, ಭೇದವನು |

ಮುಚ್ಚುವನೆ ಶರಣ ಸರ್ವಜ್ಞ ||

43. ಗಂಗೆಯಾ ತಡೆ ಲೇಸು | ಮಂಗಳನ ಬಲ ಲೇಸು |

ಜಂಗಮ ಭಕ್ತನಾ ನಡೆ ಲೇಸು, ಶರಣರಾ |

ಸಂಗವೇ ಲೇಸು ಸರ್ವಜ್ಞ ||

44. ಆಕಾಶಪಥ ವಿರಿ | ದೇಕವಸ್ತುವ ತಿಳಿದು |

ಸಾಕಾರವಳಿದು ನಿಜವಾದ ಐಕ್ಯಂಗೆ |

ಏಕತ್ರ ನೋಡು ಸರ್ವಜ್ಞ ||

45. ನಾನು-ನೀನುಗಳದು | ತಾನು ಲಿಂಗದ ಉಳಿದು |

ನಾನಾ ಭ್ರಮೆಗಳ ಅತಿಗಳೆದು ನಿಂದಾತ |

ತಾನೈಕ್ಯ ನೋಡು ಸರ್ವಜ್ಞ ||

46. ಹೀನಂಗೆ ಗತಿಯಿಲ್ಲ | ದೀನಗನುಚಿತವಲ್ಲ |

ಏನು ಇಲ್ಲದವಗೆ ಭಯವಿಲ್ಲ ಐಕ್ಕಂಗೆ |

ತಾನೆಂಬುದಿಲ್ಲ ಸರ್ವಜ್ಞ ||

47. ಆಗಿಲ್ಲ ಹೋಗಿಲ್ಲ | ಮೇಗಿಲ್ಲ ಕೆಳಗಿಲ್ಲ |

ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ |

ದೇಗುಲವೆ ಇಲ್ಲ ಸರ್ವಜ್ಞ ||

48. ಅಲಸದಾ ಶಿವಪೂಜೆ | ಹುಲುಸುಂಟು ಕೇಳಯ್ಯ |

ಬಲುಕವಲು ಒಡೆದು ಬೇರಿಂದ ತುದಿತನಕ |

ಹಲಸು ಕಾತಂತೆ ಸರ್ವಜ್ಞ ||

49. ಉಂಡುಂಡು ತಿರುಗುವಾ | ಭಂಡರಾ ಕಳೆ ಬೇಡಿ |

ಕಂಡು ಲಿಂಗವನು ಪೂಜಿಸದವಗೆ ಯಮ |

ದಂಡ ಕಾಣಯ್ಯ ಸರ್ವಜ್ಞ ||

51. ಸೃಷ್ಟಿಯೆಲ್ಲವನು ಮನ | ಮುಟ್ಟುವದು ನಿಮಿಷದಲಿ |

ನಟ್ಟು ಶಿವ-ಜೀವ-ವಿಷ ಮೂರೊಂದೆಂದು |

ದೃಷ್ಟಿಪನೆ ಶ್ರ್‍ಏಷ್ಠ ಸರ್ವಜ್ಞ ||

52. ಆತುಮದ ಲಿಂಗವನು |

ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ

ದಶವಿಧದ ಪಾತಕಗಳಿಲ್ಲ ಸರ್ವಜ್ಞ ||

53. ಲಿಂಗವನು ಅಂದವನ | ಅಂಗ ಹಿಂಗಿರಬೇಕು |

ತೆಂಗನಕಾಯಿ ಪರಿಪೂರ್ಣ ಬಲಿದು ಜಲ |

ಹಿಂಗಿದಪ್ಪಂದ ಸರ್ವಜ್ಞ ||

54. ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು |

ಲಿಂಗದಾ ನೆನಹು ಫನವಾಗಿ ಶಿವಲಿಂಗ |

ಹಿಂಗಿದಪ್ಪಂದ ಸರ್ವಜ್ಞ ||

55. ಒಮ್ಮನದ ಶಿವಪೂಜೆ | ಗಮ್ಮನೇ ಮಾಡುವದು |

ಇಮ್ಮನವ ಪಿಡಿದು ಕೆಡಬೇಡ ವಿಧಿವಶವು |

ಸರಿಮ್ಮನೇ ಕೆಡಗು ಸರ್ವಜ್ಞ 

56. ಅಷ್ಟವಿಧದರ್ಚನೆಯ | ನೆಷ್ಟು ಮಾಡಿದರೇನು ? |

ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ |

ನಷ್ಟ ಕಾಣಯ್ಯ ಸರ್ವಜ್ಞ ||

57. ಇಷ್ಟಲಿಂಗದಿ ಮನವ | ನೆಟ್ಟನೆಯ ನಿಲಿಸದಲೆ |

ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ |

ಬಟ್ಟಿಗೆ ಹೋಹ ಸರ್ವಜ್ಞ ||

58. ಎಷ್ಟು ಬಗೆಯಾತಿಯ | ಮುಟ್ಟಿಸಿದ ಫಲವೇನು ? |

ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ |

ಕೊಟ್ಟಗುರಿದಂತೆ ಸರ್ವಜ್ಞ ||

59. ಒಸೆದೆಂಟು ದಿಕ್ಕಿನಲ್ಲಿ | ಮಿಸುನಿ ಗಿಣ್ಣಲು ಗಿಂಡಿ |

ಹಸಿದು ಮಾಡುವನು ಪೂಜೆಯದು ಬೋಗಾರ |

ಪಸರ ವಿಟ್ಟಂತೆ ಸರ್ವಜ್ಞ ||

60. ಬತ್ತಿ ಹೆತ್ತುಪ್ಪವನು | ಹತ್ತಿಸಿದ ಫಲವೇನು ? |

ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ |

ಹತ್ತಿಗೇಡೆಂದು ಸರ್ವಜ್ಞ ||

61. ಎಣಿಸುತಿರ್ಪುದುಬಾಯಿ | ಪೂಣರುತಿರ್ಪುದು ಬೆರಳು |

ಕ್ಷಣಕ್ಕೂಮ್ಮೆ ಒಂದನೆಣಿಸುವಾ ಜಪಕೊಂದು |

ಕಿಣಿಕೆಯುಂಟೆಂದ ಸರ್ವಜ್ಞ ||

62. ಎಣಿಸುತಿರ್ಪುದು ಬೆರ್ಳು |

ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ |

ಶುನಕನಂತಕ್ಕು ಸರ್ವಜ್ಞ ||

63. ಕೊಲುವ ಕೈಯೊಳು ಪೂಜೆ | ಮೆಲುವ ಬಾಲೊಳು ಮಂತ್ರ |

ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ |

ಹೊಲೆಯ ಕಾಣಯ್ಯ ಸರ್ವಜ್ಞ ||

64. ಲಿಂಗಪೂಜಿಸುವಾತ | ಜಗಮಕ್ಕೆ ನೀಡಿದೊಡೆ |

ಲಿಂಗದಾ ಕ್ಷೇಮ ಫನವಾಗಿ ಆ ಲಿಂಗ |

ಹಿಂಗದಿರುತಿಹುದು ಸರ್ವಜ್ಞ ||

65. ಲಿಂಗಕ್ಕೆ ತೋರಿಸುತ | ನುಂಗವಾತನೇ ಕೇಳು |

ಲಿಂಗವುಂಬುವದೆ ? ಇದನರಿದು ಕಪಿಯೆ ನೀ |

ಜಂಗಮಕೆ ನೀಡು ಸರ್ವಜ್ಞ ||

66. ಲಿಂಗಪ್ರಸಾದವನು | ಅಂಗಕ್ಕೆ ಕೊಂಬುವರು |

ಗಂಗಾಳದೊಳಗೆ ಕೈತೊಳೆದು ಚಲ್ಲುವಾ |

ಮಂಗಗಳ ನೋಡು ಸರ್ವಜ್ಞ ||

67. ಹಲವನೋದಿದಡೇನು ? | ಚೆಲುವನಾದದಡೇನು |

ಕುಲವೀರನೆನಸಿ ಫಲವೇನು ? ಲಿಂಗದಾ |

ಒಲುಮೆ ಇಲ್ಲದಲೆ ಸರ್ವಜ್ಞ ||

68. ಓದುವಾದಗಳೇಕೆ | ಗಾದೆಯ ಮಾತೇಕೆ |

ವೇದ ಪುರಾಣವು ನಿನಗೇಕೆ ಲಿಂಗದಾ |

ಹಾದಿಯರಿಯದಲೆ ಸರ್ವಜ್ಞ ||

69. ಒಪ್ಪಾದ ನುಡಿಯೇಕೆ ? ಪುಷ್ಪವೇರಿಸಲೇಕೆ ? |

ಅರ್ಪಿತದ ಗೊಡವೆ ತನಗೇಕೆ ? ಲಿಂಗದಾ |

ನೆಪ್ಪನರಿಯದಗೆ ಸರ್ವಜ್ಞ ||

70. ಕಂಡವರ ಕಂಡು ತಾ | ಕೊಂದು ಲಿಂಗವ ಕಟ್ಟಿ |

ಕೊಡಾಡಲರಿಯದಧಮಂಗೆ ಲಿಂಗವದು |

ಕೆಂಡದಂತಿಹುದು ಸರ್ವಜ್ಞ ||

71. ಕಟ್ಟಲೂ ಬಿಡಲು ಶಿವ | ಬಿಟ್ಟಲವ ಕದ್ದನೇ |

ಕಟ್ಟಲೂ ಬೇಡಿ ಬಿಡಲೂ ಬೇಡಿ |

ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ ||

72. ಆ ದೇವ ಈ ದೇವ | ಮಹಾದೇವನೆನಬೇಡ |

ಆ ದೇವರ ದೇವ ಭುವನದಾ ಪ್ರಾಣಿಗಳಿ |

ಗಾದವನೇ ದೇವ ಸರ್ವಜ್ಞ ||

73. ಚಿತ್ರವನು ನವಿಲೊಲೆ ವಿ | ಚಿತ್ರವನು ಗಗನದೊಳು |

ಪತ್ರ ಪುಷ್ಪಗಳ ವಿವಿಧವರ್ಣಗಳಿಂದ |

ಚಿತ್ರಿಸಿದರಾರು ಸರ್ವಜ್ಞ ||

74. ಇಂಗಿನೊಳು ನಾತವನು | ತೆಂಗಿನೊಗೆಳೆ ನೀರು |

ಭ್ರಂಗ ಕೋಗಿಲೆಯ ಕಂಠದೊಳು ಗಾಯನವ |

ತುಂಬಿದವರಾರು ಸರ್ವಜ್ಞ ||

75. ಕಳ್ಳಿಯೊಳು ಹಾಲು, ಮುಳು | ಗಳ್ಳಿಯೊಳು ಹೆಜ್ಜೇನು |

ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ

ಸುಳ್ಳೆನ್ನಬಹುದೆ ? ಸರ್ವಜ್ಞ ||

76. ಗುಡಿಯ ಬೋದಿಗೆ ಕಲ್ಲು |

ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು |

ಕೊಡುವಾತ ಬೇರೆ ಸರ್ವಜ್ಞ ||

77. ಪ್ರಾಣನೂ ಪರಮಮನು | ಕಾಣದಲೆ ಒಳಗಿರಲು |

ಮಾಣದೇ ಸಿಲೆಯ ಹಿಡಿದದಕೆ ಮೂರ್ಖ, ತಾ |

ಪ್ರಾಣಾತ್ಮನೆಂಬ ಸರ್ವಜ್ಞ ||

78. ಕಲ್ಲು ಗುಂಡಿನ ಮೇಲೆ | ಮಲ್ಲಿಗೆಯ ಅರಳಿಕ್ಕಿ |

ನಿಲ್ಲದಲೆ ಹಣಿಯ ಬಡಿವರ್ಗ ಬುಗುಟಿಲ್ಲ |

ದಿಲ್ಲ ಕಾಣಯ್ಯ ಸರ್ವಜ್ಞ ||

79. ಉತ್ಪತ್ತಿಗೆ ಬೊಮ್ಮಗಡ | ಸ್ಥಿತಿಗೆ ವಿಷ್ಣು ಗಡ |

ಹತವ ಗೈವುದಕ್ಕೆ ರುದ್ರಗಣ, ಇವರುಗಳ |

ಸ್ಥಿತಿಯನರಿಯೆಂದು ಸರ್ವಜ್ಞ ||

80. ಬೊಮ್ಮನಿರ್ಮಿಪನೆಂಬ | ಮರ್ಮತಿಯ ನೀ ಕೇಳು |

ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ |

ನಿರ್ಮಿಸನದೇಕೆ ಸರ್ವಜ್ಞ ||

81. ಹುಟ್ಟಿಸುವನಜನೆಂಬ | ಕಷ್ಟದಾ ನುಡಿಬೇಡ |

ಹುಟ್ಟಿಪನು ತನ್ನ ಶಿರಹರಿಯೆ ಮತೋಂದು |

ಹುಟ್ಟಿಸನದೇಕೆ ? ಸರ್ವಜ್ಞ ||

82. ಹತ್ತು ಭವವನು ಎತ್ತಿ | ಎತ್ತು ಎಮ್ಮೆಯ ಕಾದ |

ಮತ್ತೆ ಪಾಂಡವರಿಗಾಳಾದ ಹರಿಯು ತಾ |

ನೆತ್ತಣಾ ದೈವ ಸರ್ವಜ್ಞ ||

83. ನರಸಿಂಹನವತಾರ |

ಹಿರಿದಾದ ಅದ್ಬುತವು |

ಶರಭನು ಗಿರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ||

84. ಪಾಲಿಲಿಸುವ ಹರಿಯು ತಾ | ಸೋಲನೆಂದನಬೇಡ |

ಶೂಲ ತಾ ಮಗನ ತಲೆ ಜಿಗುಟೆ ಹರಿ ಏಕೆ |

ಪಾಲಿಸದೆ ಹೋದ ಸರ್ವಜ್ಞ ||

85. ಕಲ್ಲು ಕಲ್ಲೆಂಬುವಿರಿ | ಕಲ್ಲೊಳಿರ್ಪುದೇ ದೈವ |

ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ |

ಸೊಲ್ಲೇದೈವ ಸರ್ವಜ್ಞ ||

86. ಉಣಬಂದ ಜಂಗಮಕೆ | ಉಣಬಡಿಸಲೂಲ್ಲದಲೆ |

ಉಣದಿಪ್ಪ ಲಿಂಗಕುಂಅಬಡಿಸಿ ಕೈಮುಗಿವ |

ಬಣಗುಗಳ ನೋಡು ಸರ್ವಜ್ಞ ||

87. ಆದಿ ದೈವವನು ತಾ | ಭೇದಿಸಲಿ ಕರಿಯದಲೆ |

ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ |

ಮಾದಿಗರ ನೋಡು ಸರ್ವಜ್ಞ ||

88. ತನ್ನಲಿಹ ಲಿಂಗವನು | ಮನ್ನಿ ಸಲಿಕರಿಯದಲೆ |

ಬಿನ್ನಣದ ಕಟಿಡ ಪ್ರತಿಮೆಗಳಿಗೆರಗುವಾ |

ಅನ್ಯಾಯ ನೋಡು ಸರ್ವಜ್ಞ ||

89. ಎಲ್ಲ ದೈವವ ಬೇಡಿ | ಹುಲ್ಲು ಬಾಯ್ತೆರೆಯದಲೆ |

ಬಲ್ಲ ದಾಶಿವನ ಭಜಸಿ ಬೇಡಿದಾತ |

ಇಲ್ಲೆನಲಿಕರಿಯ ಸರ್ವಜ್ಞ ||

90. ಭ್ರಷ್ಪದೈವಕ ಬಾಯಿ | ಬಿಟ್ಟಿಲ್ಲಿ ಫಲವಿಲ್ಲ |

ಸೃಷ್ಟಿಗೀಸ್ವರನ ಭಜಿಸಿದರೆ ಮುಂದಕ್ಕೆ |

ಇಷ್ಟಾರ್ಥವೀವ ಸರ್ವಜ್ಞ ||

91. ಹರಿ ಬೊಮ್ಮನೆಂಬವರು | ಹರನಿಂದಲಾದವರು |

ಅರಿಸಿಗೆ ಆಳು ಸರಿಯಹನೆ ಶಿವದಿಂದ |

ಮೆರೆವರಿನ್ನಾರು ಸರ್ವಜ್ಞ ||

92. ಹಿರಿಯ ಬೊಮ್ಮನು ಕೆಂಚ | ಕಿರಿಯ ಹರಿ ತಾ ಕರಿಗ |

ಪುರಹರನು ಶುದ್ಧ ಧವಳಾಂಕನಿವರುಗಳು |

ಸರಿಯೇ ದೈವ್ಕ್ಕೆ ಸರ್ವಜ್ಞ ||

93. ಹರಿಯಲೆಯು ಬೊಮ್ಮಂಗೆ | ಕುರಿದಲೆಯು ದಕ್ಷಂಗೆ |

ನೆರೆಹತ್ತು ಜನನವಾಹರಿಗೆ ಇವರುಗಳು |

ಸರಿಯಹರೆ ಸರ್ವಜ್ಞ ||

94. ಧರೆಯ ತೇರನು ಮಾಡಿ | ಅಜನ ಸಾರಧಿ ಮಾಡಿ |

ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ |

ಸರಿಯಾರು ಹೇಳಿ ಸರ್ವಜ್ಞ ||

95. ಇಂದ್ರನಾನೆಯನೇರಿ ಒಂದನೂ ಕೋಡಲೆರಿಯ |

ಚಂದ್ರಶೇಖರನು ಮುದಿಯೆತ್ತನೇರಿ |

ಬೇಕೆಂದುದನು ಕೊಡುವ ಸರ್ವಜ್ಞ ||

96. ಉಂಬಳಿಯ ಇದ್ದವರ | ಕಂಬಳಿಯ ಹೊದೆಯುವರೆ |

ಶಂಭುವಿದ್ದಂತೆ ಮತ್ತೊಂದು ದೈವವನು |

ನಂಬುವನೆ ಹೆಡ್ಡ ಸರ್ವಜ್ಞ ||

97. ಸುರತರವು ಸುರಧೇನು | ಸರಮಣಿಯು ಸುರಲತೆಯು |

ಪುರುಷರುತ್ತಮನ ಹರಿಯಾಗಿ ಇವರುಗಳು |

ಪರಮ ನಿಂದಾದ್ದು ಸರ್ವಜ್ಞ ||

98. ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ |

ಕೇಶವನೆಕ್ತ ಎಲ್ಲರಲಿ ಮೂರು ಕ |

ಣ್ಣೀರನೇ ದೈವ ಸರ್ವಜ್ಞ ||

99. ಹರನವನ ಕೊಲುವಂದ | ಎರಳೆಯನು ಎಸೆವಂದು |

ಮರಳಿ ವರಗಳನು ಕೊಡುವಂದು ಪುರಹರಗೆ |

ಸರಿಯಾದ ಕಾಣೆ ಸರ್ವಜ್ಞ ||

100. ಷಡುದರುಶನಾದಿಗಳು ಮೃಡಮಾಡಲಾದವೈ |

ಪೊಡ ಮಡುತ ನಿಗಮಗಳರೆಸುವ ಅಭವನಾ |

ಗಡಣಕೆಗೆ ಯಾರು ಸರ್ವಜ್ಞ ||

ನಾವು ನಿಮ್ಮೆಲ್ಲರಿಗೂ ಬಸವಣ್ಣನ ವಚನಗಳು ಇಷ್ಟಆಗಿವೆ ಅಂದುಕೊಳ್ತೀವಿ ದಯವಿಟ್ಟು

ಸರ್ವಜ್ಞನ ವಚನಗಳನ್ನು ನಿಮ್ಮ ಬಂದವರ ಜೊತೆಗೆ ಶೇರ್ ಮಾಡಿ.

    About the author

    Leave a Reply

    Your email address will not be published. Required fields are marked *

    Latest Posts